"ಎಂಜಿನಿಯರಿಂಗ್- ಮೆಡಿಕಲ್ ಸಹ ಮಾಡಬೇಕು. ಜತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಬೇಕು ಅಂದುಕೊಳ್ಳೋದು ತಪ್ಪು. ನನಗೆ ಮಗನಿಗೆ ಎಷ್ಟು ಮಾರ್ಕ್ಸ್- ಗ್ರೇಡ್ ಬಂತು ಅನ್ನೋದು ಖಂಡಿತಾ ಮುಖ್ಯವಲ್ಲ. ಆದ್ದರಿಂದಲೇ ಅವನನ್ನು ಶಾಲೆ ಬಿಡಿಸಿ, ಟೆನಿಸ್ ಆಟದಲ್ಲೇ ಪೂರ್ತಿಯಾಗಿ ತೊಡುಗುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದೀವಿ"-ಹೀಗೆಂದವರು ಮಲ್ನಾಡ್ ಕೋಚಿಂಗ್ ಸೆಂಟರ್ ನ ತೀರ್ಥಹಳ್ಳಿ ಕೇಶವಮೂರ್ತಿ. ತಂದೆ-ತಾಯಿ ತಮ್ಮ ಮಗನನ್ನು ಯಾವ ಶಾಲೆಗೆ ಸೇರಿಸುವುದು, ಯಾವುದು ಒಳ್ಳೆ ಟ್ಯೂಷನ್ ಅಂತ ಹುಡುಕಾಡಿ, ಅತ್ಯುತ್ತಮ ಅನ್ನೋದಿಕ್ಕೆ ಸೇರಿಸಬೇಕು ಎಂದು ಧಾವಂತ ಪಡುತ್ತಾರೆ. ಆದರೆ ಕೇಶವಮೂರ್ತಿ ಹಾಗೂ ಪದ್ಮಾವತಿ ದಂಪತಿ ಮಗನ ಟೆನಿಸ್ ರಾಕೆಟ್, ಷೂ, ಬಟ್ಟೆ, ಪೋಷಕಾಂಶ ಇರುವ ಆಹಾರ ಈ ಬಗ್ಗೆಯೇ ಯೋಚಿಸುತ್ತಾರೆ.ತಮ್ಮ ಮಗ ಅನೂಪ್ ನನ್ನು ಎರಡು ವರ್ಷದ ಹಿಂದೆ ಶಾಲೆ ಬಿಡಿಸಿದ್ದಾರೆ. ಅಂದರೆ ಶಾಲೆಗೆ ಹೋಗಲ್ಲ. ಆದರೆ ಫೀ ಕಟ್ಟಿದ್ದಾರೆ. ಪಾಠವನ್ನು ಕೇಶವಮೂರ್ತಿ ಮತ್ತು ಪದ್ಮಾವತಿ ಅವರೇ ಮಾಡ್ತಾರೆ. ಹುಡುಗ ವಾರ್ಷಿಕ ಪರೀಕ್ಷೆಯನ್ನು ಬರೆಯುತ್ತಾನೆ. <br /> This father has set an example to other parents who say sports can't feed anyone. These parents have made his son discontinue his education and let him play just tennis